ಬಿಜೆಪಿಗೆ ಇನ್ನೂ ಸಹ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದರೆ ಭಾರಿ ಚೌಕಾಶಿ ವ್ಯವಹಾರ ನಡೆಯುತ್ತಿದೆ ಎಂದೇ ಅರ್ಥ ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ಹುದ್ದೆಗೆ ₹ 2,500 ಕೋಟಿ ಫಿಕ್ಸ್ ಆಗಿತ್ತು, ವಿಪಕ್ಷ ನಾಯಕನ ಹುದ್ದೆಯನ್ನೂ ಮಾರಾಟಕ್ಕಿಡಲಾಗಿದೆಯೇ? ಎಂದು ಕೇಳಿದೆ.
ವಿಪಕ್ಷ ನಾಯಕನ ಹುದ್ದೆಗೆಷ್ಟು? ಪಕ್ಷದ ಅಧ್ಯಕ್ಷ ಹುದ್ದೆಗೆಷ್ಟು? ಎನ್ನುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು ಎಂದು ಟ್ವೀಟ್ ಮಾಡಿದೆ.