Home ಅಪರಾಧ ವಿಜಯನಗರ: ಲಾರಿ-ಮಿನಿಲಾರಿ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

ವಿಜಯನಗರ: ಲಾರಿ-ಮಿನಿಲಾರಿ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

0

ವಿಜಯನಗರ: ಜಿಲ್ಲೆಯ ಕೂಡ್ಲಿಗಿ- ಕೊಟ್ಟೂರು ಮಾರ್ಗಮಧ್ಯೆಯ ಸಾಸಲವಾಡ ಕ್ರಾಸ್ ಬಳಿ ನಿಂತಿದ್ದ ಮಿನಿ ಲಾರಿಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ನಡೆದಿದೆ. ಗಜಾಪುರದ ಮಿನಿಲಾರಿ ಚಾಲಕ ಗುರುವಣ್ಣ(40) ಬತ್ತನಹಳ್ಳಿಯ ತಿಪ್ಪಣ್ಣ(55) ಬಸವರಾಜ್ (25) ಮೃತಪಟ್ಟ ದುರ್ದೈವಿಗಳಾಗಿದ್ದಾರೆ, ಕೊಟ್ಟೂರು ತಾಲೂಕಿನ ಬತ್ತನಹಳ್ಳಿಯ ತಿಪ್ಪಣ್ಣ ಹಾಗೂ ಅವರ ಸಂಬಂಧಿಕರು ಹುಲಿಗಿ ದೇವಾಲಯಕ್ಕೆ ಹೊರಟಿದ್ದರು, ಮೀನಿಲಾರಿ ಹತ್ತಿದ 10 ಜನರು, ಸಾಸಲವಾಡ ಕ್ರಾಸ್ ಬಳಿ, ತಮ್ಮ ಸಂಬಂಧಿಕರಿಗಾಗಿ ಕಾಯ್ತಾ ಇದ್ರು ನಿಂತಿದ್ದ ಮಿನಿ ಲಾರಿಗೆ ಲಾರಿ ಡಿಕ್ಕಿ ಹೊಡೆದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಉಳಿದವರಿಗೆ ಸಣ್ಣ, ಪುಟ್ಟ ಗಾಯಗಳಾಗಿದ್ದು, ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿಎಲ್ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version