Home News ವಾಂತಿ-ಭೇದಿ: ಓರ್ವ ಸಾವು, 52 ಜನ ಅಸ್ವಸ್ಥ

ವಾಂತಿ-ಭೇದಿ: ಓರ್ವ ಸಾವು, 52 ಜನ ಅಸ್ವಸ್ಥ

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ‌ ಗ್ರಾಮದಲ್ಲಿ ವಾಂತಿ ಭೇದಿ ಉಲ್ಬಣಗೊಂಡಿದ್ದು, ಓರ್ವ ಸಾವನ್ನಪ್ಪಿದ್ದು, 52 ಜನ ಅಸ್ವಸ್ಥರಾಗಿದ್ದಾರೆ.

ಕಳೆದ ರಾತ್ರಿ ವಾಂತಿ ಭೇದಿಯಿಂದ ಮಂದೆವಾಲ ಗ್ರಾಮದ ತಾಯಪ್ಪ(70) ಎನ್ನುವವರು ಮೃತಪಟ್ಟಿದ್ದಾರೆ‌.

ಕಲುಷಿತ ನೀರು ಸೇವಿಸಿದ್ದ ಪರಿಣಾಮ ವಾಂತಿ ಭೇದಿ ಉಂಟಾಗಿ ತಾಯಪ್ಪ ಮೃತಪಟ್ಟಿದ್ದಾರೆ.

ಕಳೆದ ರಾತ್ರಿಯಿಂದ ಗ್ರಾಮದಲ್ಲಿ ವಾಂತಿ ಭೇದಿ ಉಲ್ಬಣವಾಗಿದ್ದು ಅಸ್ವಸ್ಥರನ್ನು ಜೇವರ್ಗಿ ಮತ್ತು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ‌.

Exit mobile version