Home ತಾಜಾ ಸುದ್ದಿ ಲೋಕಸಭೆಯಲ್ಲೇ ಫ್ಲೈಯಿಂಗ್‌ ಕಿಸ್‌ ನೀಡಿದ ರಾಹುಲ್‌ ಗಾಂಧಿ!

ಲೋಕಸಭೆಯಲ್ಲೇ ಫ್ಲೈಯಿಂಗ್‌ ಕಿಸ್‌ ನೀಡಿದ ರಾಹುಲ್‌ ಗಾಂಧಿ!

0

ನವ ದೆಹಲಿ: “ಅವಿಶ್ವಾಸ ಗೊತ್ತುವಳಿ” ನಿರ್ಣಯದ ಮೇಲಿನ ಚರ್ಚೆಯಲ್ಲಿ ರಾಹುಲ್ ಗಾಂಧಿ ಅವರ ಭಾಷಣದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಭಾಷಣ ನಿಗದಿಯಾಗಿತ್ತು. ತಮ್ಮ ಭಾಷಣ ಮುಗಿಸಿ ಲೋಕಸಭೆಯಿಂದ ಹೊರ ನಡೆಯುವ ಮುನ್ನ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ಅವರ ಕಡೆಗೆ ನೋಡುತ್ತಾ ‘ಫ್ಲೈಯಿಂಗ್ ಕಿಸ್’ ಕೊಟ್ಟರು ಎನ್ನಲಾಗಿದೆ! ಸ್ಮೃತಿ ಇರಾನಿ ಅವರು, ರಾಹುಲ್ ಗಾಂಧಿ ಅವರ ಈ ವರ್ತನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಲೋಕಸಭೆಯಲ್ಲಿ ಮಹಿಳಾ ಸಂಸದೆಯೊಬ್ಬರ ಕಡೆಗೆ ನೋಡುತ್ತಾ ‘ಫ್ಲೈಯಿಂಗ್ ಕಿಸ್’ ಮಾಡುವ ಈ ವರ್ತನೆಗೆ ಏನು ಹೇಳಬೇಕು ಎಂದು ಸ್ಮೃತಿ ಇರಾನಿ ಅವರು ಪ್ರಶ್ನಿಸಿದರು.

Exit mobile version