Home ತಾಜಾ ಸುದ್ದಿ ಲಂಡನ್ ಘಟಿಕೋತ್ಸವದಲ್ಲಿ ಕನ್ನಡದ ಕಂಪು ಬೀರಿದಾತನಿಗೆ ಸಿಗುವುದೇ ಸಿಎಂ‌ ಭೇಟಿ

ಲಂಡನ್ ಘಟಿಕೋತ್ಸವದಲ್ಲಿ ಕನ್ನಡದ ಕಂಪು ಬೀರಿದಾತನಿಗೆ ಸಿಗುವುದೇ ಸಿಎಂ‌ ಭೇಟಿ

0

ಲಂಡನ್ ಮೂಲಕ ಕನ್ನಡ ಪ್ರೇಮ ಮೆರೆದ ವಿದ್ಯಾರ್ಥಿ, ಆದೀಶ ರಜನೀಶ  ಈಗ ಮತ್ತೆ ಸುದ್ದಿಯಲ್ಲಿದ್ದಾನೆ. ಅಂದು ಬ್ರಿಟನ್‌ನಲ್ಲಿರುವ ಲಂಡನ್‌ ಸಿಟಿ ವಿವಿಯ ಬೇಯಸ್‌ ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ಕನ್ನಡ ಧ್ವಜ ಹಿಡಿದು ಪದವಿ ಸ್ವೀಕರಿಸಿದ್ದು
ಸಾಮಾಜಿಕ ಜಾಲತಾಣದಲ್ಲಿ ತೀವ್ರ ಮೆಚ್ಚುಗೆ ವ್ಯಕ್ತವಾಗಿತ್ತು, ಅನೇಕ ಗಣ್ಯರು ಕನ್ನಡಿಗರು ಆದೀಶಗೆ ಶುಭ ಹಾರೈಸಿದ್ದರು,
ಸಿಎಂ ಸಿದ್ದರಾಮಯ್ಯ ಸಹ ಟ್ವಿಟ್ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು,
ಇಂದು ಎಂಎಲ್ ಸಿ ಅರವಿಂದಕುಮಾರ ಅರಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವೊಂದನ್ನು ಬರೆದಿದ್ದು, ಆದೀಶ ಬೆಂಗಳೂರಿಗೆ ಬಂದಿದ್ದು, ಆದೀಶ ತಮ್ಮನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲು ಕೋರಿದ್ದಾರೆ.
ಆದೀಶನಿಗೆ ಸಿಎಂ ಭೇಟಿ ಅವಕಾಶ ಸಿಗಬಹದುದೇ ಎಂದು ಕಾದು ನೋಡಬೇಕಿದೆ.

Exit mobile version