Home ಸುದ್ದಿ ದೇಶ ರಾಮನ ಆಶೀರ್ವಾದ ರಾಗಾಗೆ: ಅಯೋಧ್ಯೆ ಪ್ರಧಾನ ಅರ್ಚಕರ ಪತ್ರ

ರಾಮನ ಆಶೀರ್ವಾದ ರಾಗಾಗೆ: ಅಯೋಧ್ಯೆ ಪ್ರಧಾನ ಅರ್ಚಕರ ಪತ್ರ

0

ಅಯೋಧ್ಯೆ: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಅಯೋಧ್ಯೆ ರಾಮ ಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ರಾಹುಲ್‌ ಗಾಂಧಿ ಅವರಿಗೆ ಪತ್ರವೊಂದನ್ನು ರವಾನಿಸಿದ್ದು, ತಮ್ಮ ಆಶೀರ್ವಾದ ಸದಾ ನಿಮ್ಮೊಂದಿಗಿರಲಿದೆ ಎಂದು ಹರಸಿದ್ದಾರೆ.
ನೀವು ಜನರ ಹಿತಾಸಕ್ತಿ ಮತ್ತು ಅವರ ಸಂತೋಷಕ್ಕಾಗಿ ‘ಸರ್ವಜನ್ ಹಿತೈ ಸರ್ವಜನ್ ಸುಖೇ’ ಎಂಬ ಉದಾತ್ತ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದೀರಿ. ಶ್ರೀರಾಮನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುವುದಾಗಿ ದಾಸ್ ಉಲ್ಲೇಖಿಸಿದ್ದಾರೆ.

Exit mobile version