Home ಅಪರಾಧ ರಸ್ತೆ ಅಪಘಾತ: ಇಬ್ಬರು ಸಾವು

ರಸ್ತೆ ಅಪಘಾತ: ಇಬ್ಬರು ಸಾವು

0

ಸಾಗರ(ಆನಂದಪುರ): ಸಮೀಪದ ಹೊಸಗುಂದ ಕ್ರಾಸ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ೬೯ರ ಸಾಗರ ರಸ್ತೆಯ ಹೊಸಗುಂದ ಕ್ರಾಸ್‌ನಲ್ಲಿ ಕಳೆದ ರಾತ್ರಿ ಬೈಕು, ಕಾರು ಮತ್ತು ಆಟೋಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಬೈಕ್ ಚಾಲಕ ಕೆಳದಿಯ ಸುಧೀರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆಟೋ ಚಾಲಕ ಸಾಗರ ಪಟ್ಟಣದ ಗಾಂಧಿನಗರದ ರಾಘವೇಂದ್ರ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಸಾಗರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ಐವರು ಗಾಯಗೊಂಡಿದ್ದಾರೆ. ಪ್ರಕರಣ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Exit mobile version