Home ತಾಜಾ ಸುದ್ದಿ ಮುನಿರತ್ನ ಅವರದ್ದೇ ಆಡಿಯೋ ಎಂದು ಖಚಿತವಾದರೆ ಕಾನೂನು ಕ್ರಮ

ಮುನಿರತ್ನ ಅವರದ್ದೇ ಆಡಿಯೋ ಎಂದು ಖಚಿತವಾದರೆ ಕಾನೂನು ಕ್ರಮ

0

ತುಮಕೂರು: ಬಿಜೆಪಿ ಶಾಸಕ ಮುನಿರತ್ನ ಆಡಿಯೋವನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಆಡಿಯೋ ಅವರದ್ದಾ, ಅಥವಾ ಅಲ್ಲವಾ ಎಂಬ ಬಗ್ಗೆ ಪರೀಕ್ಷಿಸಿ ದೃಢಪಡಿಸುತ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಎಫ್‌ಎಸ್‌ಎಲ್‌ ವರದಿಯಲ್ಲಿ ಅವರದ್ದೇ ಆಡಿಯೋ ಎಂದಾದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದರು.

Exit mobile version