Home ನಮ್ಮ ಜಿಲ್ಲೆ ಮಂತ್ರಾಲಯ ಶ್ರೀರಾಯರ ದರ್ಶನ ಪಡೆದ ಸಚಿವ ಕೆ.ಎಚ್ ಮುನಿಯಪ್ಪ

ಮಂತ್ರಾಲಯ ಶ್ರೀರಾಯರ ದರ್ಶನ ಪಡೆದ ಸಚಿವ ಕೆ.ಎಚ್ ಮುನಿಯಪ್ಪ

0

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಭಾನುವಾರ ಭೇಟಿ ನೀಡಿದರು.
ಸುಕ್ಷೇತ್ರದ ಗ್ರಾಮ ದೇವತೆ ಮಂಚಾಲಮ್ಮ ದೇವಿಗೆ ಪೂಜೆ ಸಲ್ಲಿಸಿದ ಸಚಿವರು ನಂತರ ಶ್ರೀಗುರು ರಾಯರ ಮೂಲ ಬೃಂದಾವನ ದರ್ಶನ ಪಡೆದರು. ನಂತರ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸಚಿವರನ್ನು ಸನ್ಮಾನಿಸಿ, ಆಶೀರ್ವದಿಸಿದರು.

Exit mobile version