Home ತಾಜಾ ಸುದ್ದಿ ಭೂಮಿಗೆ ಮರಳಿದ ಸುನಿತಾ

ಭೂಮಿಗೆ ಮರಳಿದ ಸುನಿತಾ

0

ನವದೆಹಲಿ: ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ನಾಸಾದ ಬುಚ್ ವಿಲ್ಮೋರ್ ಒಂಬತ್ತು ತಿಂಗಳ ಬಾಹ್ಯಾಕಾಶ ಸಂಶೋಧನೆಯ ಬಳಿಕ ಭೂಮಿಗೆ ಯಶಸ್ವಿಯಾಗಿ ಮರಳಿದ್ದಾರೆ.

ಇಂದು ಮುಂಜಾನೆ 3 ಗಂಟೆಗೆ ಭೂಮಿಗೆ ಯಶಸ್ವಿಯಾಗಿ ಹಿಂತಿರುಗಿದ್ದಾರೆ. ಅವರ ಬಾಹ್ಯಾಕಾಶ ಅಧ್ಯಯನ ಮತ್ತು ಪ್ರಯೋಗಾತ್ಮಕ ಕಾರ್ಯಗಳು ಭವಿಷ್ಯದ ಅನೇಕ ವಿಜ್ಞಾನಾ ಮತ್ತು ತಂತ್ರಜ್ಞಾನ ಅಭಿವೃದ್ಧಿಗಳಿಗೆ ಪೂರಕವಾಗುವ ನಿರೀಕ್ಷೆಯಿದೆ. ಅವರ ಮಹತ್ವದ ಸಾಧನೆ, ಧೈರ್ಯ ಭವಿಷ್ಯದ ಗಗನಯಾತ್ರಿಗಳು ಮತ್ತು ಎಲ್ಲ ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯಾಗಿದ್ದು, ಅವರು ಸಂಶೋಧನ ನಿಮಿತ್ತ 1 ವಾರದ ಬಾಹ್ಯಕಾಶ ಯಾನ ಕೈಗೊಂಡು ತಾಂತ್ರಿಕ ವೈಫಲ್ಯದಿಂದ ಭೂಮಿಗೆ ಮರಳಲಾಗದೆ  ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೆ ಸಿಲುಕಿ, ದಿಟ್ಟತನದಿಂದ ಎದುರಿಸಿ ಭೂಮಿಗೆ ಮರಳಿದ್ದಾರೆ,  ಭುವಿಗೆ ಮರಳಲು ಸಹಕರಿಸಿದ ಸ್ಪೇಸ್ ಎಕ್ಸ್, ನಾಸಾ ಮತ್ತು ಸುನಿತಾ ವಿಲಿಯಮ್ಸ್ ಅವರಿಗೆ  ಅಭಿನಂದನೆಗಳ ಮಾಹಾಪೂರವೇ ಹರಿದುಬಂದಿದೆ.

ಕಲ್ಪನಾ ಚಾವ್ಲಾ ರವರ ನಂತರ ಅಂತರಿಕ್ಷ ಗೆದ್ದ ದಿಟ್ಟ ಮಹಿಳೆ ಸುನಿತಾ ವಿಲಿಯಮ್ಸ್ ತಂಡದವರ ಪರಿಶ್ರಮ, ಧೈರ್ಯ ಮತ್ತು ತ್ಯಾಗ ಭವಿಷ್ಯದ ಗಗನಯಾತ್ರಿಗಳಿಗೆ ಮತ್ತು ವಿಜ್ಞಾನ ಪ್ರೇಮಿಗಳಿಗೆ ಪ್ರೇರಣೆಯಾಗಿದೆ.

Exit mobile version