Home ಅಪರಾಧ ಸಿಲಿಂಡರ್ ಸ್ಫೋಟ: ನಾಲ್ವರಿಗೆ ಗಾಯ

ಸಿಲಿಂಡರ್ ಸ್ಫೋಟ: ನಾಲ್ವರಿಗೆ ಗಾಯ

0

ಬೆಳಗಾವಿ: ಸುಭಾಷ್ ಗಲ್ಲಿಯ ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆಳಗಾವಿಯ ಗಾಂಧಿ ನಗರದ ಸುಭಾಷ್‌ಗಲ್ಲಿಯ ಸಾರಿಗೆ ನೌಕರ ಮಂಜುನಾಥ (42), ಪತ್ನಿ ಲಕ್ಷ್ಮೀ(36) ವೈಷ್ಣವಿ (13), ಪುತ್ರ ಸಾಯಿಪ್ರಸಾದ (10) ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರು ತಕ್ಷಣವೇ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಂದಿನಂತೆ ಬೆಳಗ್ಗೆ ಎದ್ದು ಚಹಾ ಮಾಡಲು ಸಿಲಿಂಡರ್ ಗ್ಯಾಸ್ ಉರಿಸಲು ಲೈಟರ್ ಆನ್ ಮಾಡಿದಾಗ ಬೆಂಕಿ ಹತ್ತಿಕೊಂಡಿದೆ. ಮಾಳಮಾರುತಿ ಠಾಣೆ ಪೊಲೀಸರು ಕೂಡ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Exit mobile version