Home ತಾಜಾ ಸುದ್ದಿ ಬಿಜೆಪಿ ಸೇರಿದ ರಾಜನಂದಿನಿ

ಬಿಜೆಪಿ ಸೇರಿದ ರಾಜನಂದಿನಿ

0

ಬೆಂಗಳೂರು: ಮಾಜಿ ಸಚಿವ ಹಾಗೂ ಹಿಂದುಳಿದ ವರ್ಗಗಳ ನಾಯಕ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದ ರಾಜ ನಂದಿನಿ ಅವರಿಗೆ ಟಿಕೆಟ್ ಕೈ ತಪ್ಪಿತ್ತು.
ಟೆನ್ನಿಸ್ ಆಟಗಾರ್ತಿ ತೀರ್ಥ ಇಸ್ಕಾ, ಮುಖಂಡರಾದ ರತ್ನಾಕರ ಹೊನಗೋಡು, ಭೈರಪ್ಪ, ರಮೇಶ್ ಮತ್ತು ಇತರರು ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ರಾಜನಂದಿನಿ

Exit mobile version