Home ತಾಜಾ ಸುದ್ದಿ ಬಿಜೆಪಿಯವರಿಗೆ ಏನ ಬೇರೆ ಕಾನೂನು ಇದೆಯಾ.?

ಬಿಜೆಪಿಯವರಿಗೆ ಏನ ಬೇರೆ ಕಾನೂನು ಇದೆಯಾ.?

0

ಹುಬ್ಬಳ್ಳಿ: ಸನಾತನ ಧರ್ಮದ ವಿಚಾರವಾಗಿ ಮಾತನಾಡಿಲ್ಲ. ಬೇರೆಯವರು ಏನ ವಿಶ್ಲೇಷಣೆ ಮಾಡುತ್ತಾರೆ. ಅದಕ್ಕೆಲ್ಲ ಉತ್ತರ ಕೊಡಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಮಯ ಸಂದರ್ಭದಲ್ಲಿ ಏನ ಹೇಳಬೇಕೋ ಅದನ್ನು ಹೇಳಿದ್ದೇನೆ. ನಮ್ಮ ಅಭಿಪ್ರಾಯ ಹೇಳಿದ್ದೇನೆ. ಯಾರ ಏನ ಬೇಕಾದರೂ ವಿಶ್ಲೇಷಣೆ ಮಾಡಲಿ. ಅವರ ಹಾಗೇ ಮಾತನಾಡುತ್ತಾರೆ, ಹೀಗೆ ಮಾತನಾಡುತ್ತಾರೆ ಅಂದರೆ ನಾನು ಉತ್ತರ ಕೊಡುವುದಿಲ್ಲ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾನು ಹೇಳಿರೋ ಹೇಳಿಕೆ ಬಗ್ಗೆ ಮಾತನಾಡಿಲ್ಲ‌. ಸನಾತನ ಧರ್ಮದ ವಿಚಾರವಾಗಿ ಮಾತಾಡಿದ್ದಾರೆ ಎಂದರು. ಇನ್ನು ಬಿಜೆಪಿಯವರು ಹೋರಾಟ ಮಾಡಲಿ ನಾವು ಉತ್ತರ ಕೊಡುತ್ತೇವೆ. ಈಗಾಗಲೇ ಜನ ಉತ್ತರ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನ ಮತ್ತೊಮ್ಮೆ ಉತ್ತರ ಕೊಡತ್ತಾರೆ ಎಂದು ಹೇಳಿದರು. ಬರಗಾಲದ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿದೆ. ಶಿಘ್ರವೇ ಬರಗಾಲ ಘೋಷಣೆ ಮಾಡಲಾಗವುದು, ಜೊತೆಗೆ ಕೇಂದ್ರಕ್ಕೂ ವರದಿ ಕಳಸ್ತೀವಿ ಎಂದು ಗೃಹ ಸಚಿವರು ತಿಳಿಸಿದರು. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಬಿಜೆಪಿಯವರಿಗೆ ಏನ ಬೇರೆ ಕಾನೂನು ಇದೆಯಾ.?? ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನೆ ಮಾಡಿದರು.

Exit mobile version