Home ತಾಜಾ ಸುದ್ದಿ ಪ್ಲಾನ್ ಇಲ್ಲದೇ ಯೋಜನೆ ಜಾರಿ

ಪ್ಲಾನ್ ಇಲ್ಲದೇ ಯೋಜನೆ ಜಾರಿ

0

ಧಾರವಾಡ: ಸರಿಯಾದ ರೀತಿಯ ವ್ಯವಸ್ಥೆ ಮತ್ತು ಪ್ಲಾನ್ ಇಲ್ಲದೇ ಉಚಿತ ಬಸ್ ಯೋಜನೆಯನ್ನು ಕಾಂಗ್ರೆಸ್ ಜಾರಿಗೊಳಿಸಿದೆ ಎಂದು ಕೆಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಗ್ಗದ ಜನಪ್ರೀಯತೆಗೆ ಕಾಂಗ್ರೆಸ್ ಮುಂದಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ದುರ್ಘಟನೆ ಆಗುತ್ತಿವೆ ಎಂದರು.
ಉಚಿತವಾಗಿ ನೀಡುವುದು ಎಷ್ಟು ಮುಖ್ಯವೋ ಜನರ ಜೀವ ಕಾಪಾಡುವುದೂ ಅಷ್ಟೇ ಸರಕಾರದ ಜವಾಬ್ದಾರಿ ಆಗಿದೆ. ಶಿಸ್ತುಬದ್ಧ ಯೋಜನೆಯನ್ನು ಸರಕಾರ ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಕಾಂಗ್ರೆಸ್ ಪಕ್ಷ ಶೆಟ್ಟರ ಅವರಿಗೆ ಪರಿಷತ್ ಟಿಕೇಟ್ ನೀಡಿದೆ. ಅವರಿಗೆ ಒಳ್ಳೆಯದಾಗಲಿ ಎಂದು ಸುಮ್ಮನಾದರು.

Exit mobile version