Home ಸುದ್ದಿ ದೇಶ ಪ್ರಧಾನಿ ಮೋದಿ ಭೇಟಿ ಮಾಡಿದ ಪ್ರಜ್ಞಾನಂದ

ಪ್ರಧಾನಿ ಮೋದಿ ಭೇಟಿ ಮಾಡಿದ ಪ್ರಜ್ಞಾನಂದ

0

ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ರನ್ನರ್‌ಅಪ್ ಪ್ರಶಸ್ತಿ ಪಡೆದುಕೊಂಡ ಪ್ರಜ್ಞಾನಂದ ಮತ್ತು ಅವರ ಕುಟುಂಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ವಿಶ್ವಕಪ್‌ನ ಫೈನಲ್‌ನಲ್ಲಿ ದಿಗ್ಗಜ ಆಟಗಾರ ವಿಶ್ವದ ನಂಬರ್ 1 ಕಾರ್ಲ್ಸನ್ ಮ್ಯಾಗ್ನಸ್‌ಗೆ ಬಲಿಷ್ಠ ಪೈಪೋಟಿ ನೀಡಿ ಪ್ರಜ್ಞಾನಂದ ಗೆದ್ದ ಬೆಳ್ಳಿ ಪದಕವನ್ನು ನೋಡಿ ಪ್ರಧಾನಿ ಸಂತಸಪಟ್ಟಿದ್ದಾರೆ.
ದೆಹಲಿಯಲ್ಲಿರುವ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಪ್ರಜ್ಞಾನಂದ ತಮ್ಮ ತಾಯಿ ನಾಗಲಕ್ಷ್ಮೀ ಹಾಗೂ ತಂದೆ ರಮೇಶ್ ಬಾಬು ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

Exit mobile version