Home ತಾಜಾ ಸುದ್ದಿ ಪತಿ ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು ಉಲ್ಲೇಖಿಸಿದ ಸುನಿತಾ

ಪತಿ ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು ಉಲ್ಲೇಖಿಸಿದ ಸುನಿತಾ

0

ನವದೆಹಲಿ: ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್‌ ಇಂದು ಜೈಲಿನಿಂದ ಅರವಿಂದ್ ಕೇಜ್ರಿವಾಲ್ ಕಳಿಸಿರುವ ಅವರ ಸಂದೇಶವನ್ನು ಓದಿದರು.
ಕೇಜ್ರಿವಾಲ್ ಅವರ ಪತ್ನಿ, ದೆಹಲಿ ಮುಖ್ಯಮಂತ್ರಿಯನ್ನು ಉಲ್ಲೇಖಿಸಿ, ಯಾವುದೇ ಜೈಲು ನನ್ನನ್ನು ಒಳಗೆ ಇಡಲು ಸಾಧ್ಯವಿಲ್ಲ ಮತ್ತು ನಾನು ಹೊರಗೆ ಬಂದು ನನ್ನ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದರು. ಅರವಿಂದ್ ಕೇಜ್ರಿವಾಲ್ ಅವರ ಬಂಧನದಿಂದಾಗಿ ಬಿಜೆಪಿ ಸದಸ್ಯರನ್ನು ದ್ವೇಷಿಸಬೇಡಿ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ ಕೇಳಿಕೊಂಡರು. ದೇಶದ ಒಳಗೆ ಮತ್ತು ಹೊರಗೆ ಕೆಲವು ಶಕ್ತಿಗಳು ಭಾರತವನ್ನು ದುರ್ಬಲಗೊಳಿಸಲು ಬಯಸುತ್ತವೆ, ದೆಹಲಿಯಲ್ಲಿರುವ ನನ್ನ ಮಾತೇಯರು, ಸಹೋದರಿಯರು ತಮ್ಮ ಮಗ ಅಥವಾ ಸಹೋದರ ಜೈಲಿಗೆ ಹೋಗಿದ್ದಾರೆ ಎಂಬ ಭಾವನೆ ಇರಬೇಕು. ಈಗ ಅವರಿಗೆ ₹1000 ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ, ನಿಮ್ಮ ಮಗ ಮತ್ತು ಸಹೋದರ ನೀಡಿದ ಭರವಸೆಗಳನ್ನು ಈಡೇರಿಸದೆ ಬಿಡುವುದಿಲ್ಲ, ದೆಹಲಿಯ ಅಭಿವೃದ್ದಿಯ ಕೆಲಸವು ನಿಲ್ಲಿಸಲು ನಾನು ಬಿಡುವುದಿಲ್ಲ ಎಂದಿದ್ದಾರೆ

ಪತಿ ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು ಉಲ್ಲೇಖಿಸಿದ ಸುನಿತಾ

Exit mobile version