Home ನಮ್ಮ ಜಿಲ್ಲೆ ಚಿಕ್ಕಮಗಳೂರು ಧರ್ಮಸ್ಥಳಕ್ಕೂ ಹೋಗುತ್ತೇನೆ, ಸವದತ್ತಿಗೂ ಹೋಗುತ್ತೇನೆ…

ಧರ್ಮಸ್ಥಳಕ್ಕೂ ಹೋಗುತ್ತೇನೆ, ಸವದತ್ತಿಗೂ ಹೋಗುತ್ತೇನೆ…

0

ಚಿಕ್ಕಮಗಳೂರು: ಕಾನೂನಾತ್ಮಾಕ ಹಾಗೂ ರಾಜಕೀಯವಾಗಿ ಪ್ರಕರಣ ಮುಗಿದ ಮೇಲೆ ಧರ್ಮಸ್ಥಳಕ್ಕೂ ಹೋಗುತ್ತೇನೆ, ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಲಕ್ಷ್ಮೀ ಹೆಬ್ಬಾಳ್ಕರ್ ಧರ್ಮಸ್ಥಳ ಆಣೆ ಪ್ರಮಾಣ ಆಹ್ವಾನಕ್ಕೆ ತಿರುಗೇಟು ನೀಡಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನನ್ನು ಇಡೀ ಜಿಲ್ಲೆ ಸುತ್ತಿಸುವಾಗ ಯಲ್ಲಮ್ಮ ದೇವಸ್ಥಾನ ಮುಂದೇ ಕರೆದೊಯ್ದಿದ್ದಾರೆ. ಆಗ ಯಲ್ಲಮ್ಮನ ದೇವಿಯಲ್ಲಿ ಹರಕೆ ಕಟ್ಟಿಕೊಂಡಿದ್ದೇನೆ. ಪ್ರಕರಣ ಮುಗಿದ ಮೇಲೆ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ಹರಕೆ ತಿರಿಸುತ್ತೇನೆ, ಧರ್ಮಸ್ಥಳಕ್ಕೂ ಹೋಗುತ್ತೇನೆ ಎಂದು ಹೇಳಿದರು.
ಹರಕೆ ಏನು ಕಟ್ಟಿಕೊಂಡಿದ್ದೇನೆ ಎಂದು ಈಗ ಹೇಳಲ್ಲ, ಹರಕೆ ತೀರಿಸಿದ ಮೇಲೆ ಹೇಳುತ್ತೇನೆ. ಖಾನಾಪುರ ಪಿಎಸ್‌ಐ ಮಂಜುನಾಥ ಅಮಾನತು ಮಾಡಿರುವ ವಿಚಾರ ತಿಳಿದಿಲ್ಲ. ಪಿಎಸ್‌ಐ ಅಮಾನತು ಮಾಡುವುದಲ್ಲ ಕಮಿಷನರ್, ಎಸ್‌ಪಿ ಪ್ರಕರಣಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮ ಆಗಬೇಕು. ನಾನು ನೀಡಿದ ಕಂಪ್ಲೆಟ್ ರಿಜಿಸ್ಟರ್ ಆಗಬೇಕು ಎಂದು ಆಗ್ರಹಿಸಿದರು.

Exit mobile version