ಚಿಕ್ಕಮಗಳೂರು: ಮಳೆಗೆ ಜಿಲ್ಲೆಯಲ್ಲಿ ಮೂರನೇ ಬಲಿಯಾದ ಘಟನೆ ನಡೆದಿದೆ. ಅಡಿಕೆ ತೋಟ ನೋಡಲು ತೆರಳಿದ್ದ ವೃದ್ಧೆ ನಾಪತ್ತೆ ಪ್ರಕರಣದಲ್ಲಿ, ವೃದ್ಧೆಯ ಶವ ಪತ್ತೆಯಾಗಿದ್ದು ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು ಎನ್ನಲಾಗಿದೆ. ಮೃತ ದುರ್ದೈವಿ ಹೊಸ ಸಿದ್ದರಹಳ್ಳಿ ಗ್ರಾಮದ ರೇವಮ್ಮ (62). ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ರಾಮಮ್ಮ ಇಂದು ತಾಯಿ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದೆ.