ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿನ ಜಯನಗರ ಡಿಪೋಗೆ ಭೇಟಿ ನೀಡಿ ಹಳೆಯ ನೆನಪುಗಳನ್ನ ಸ್ಮರಿಸಿದ್ದಾರೆ. ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡುವ ಮುನ್ನ ಜಯನಗರದ ಡಿಪೋದಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ರಜನಿಕಾಂತ್ ಇಂದು ತಾವು ಕರ್ತವ್ಯ ನಿರ್ವಹಿಸಿದ್ದ ಜಾಗಕ್ಕೆ ಅಚಾನಕ ಬೇಟಿ ನೀಡಿದ್ದಾರೆ, ಕಾರ್ಮಿಕರಿಗೆ ಅಚ್ಚರಿ ಮೂಡಿಸಿದ್ದು ಅವರೊಂದಿಗೆ ಕೆಲ ಹೊತ್ತು ಕಾಲ ಮಾತುಕತೆ ನಡೆಸಿದ್ದಾರೆ. ರಜನಿಕಾಂತ್ ಸೀತಾಪತಿ ಅಗ್ರಹಾರ ಶ್ರೀ ರಾಘವೇಂದ್ರ ಮಠಕ್ಕೆ ತೆರಳಿ ರಾಯರ ದರ್ಶನ ಪಡೆದರು.
