Home ತಾಜಾ ಸುದ್ದಿ ಜಗದೀಶ ಶೆಟ್ಟರ ಅವರಿಂದ ಬಿಜೆಪಿಗೆ ದ್ರೋಹ

ಜಗದೀಶ ಶೆಟ್ಟರ ಅವರಿಂದ ಬಿಜೆಪಿಗೆ ದ್ರೋಹ

0
ಯಡಿಯೂರಪ್ಪ

ಹುಬ್ಬಳ್ಳಿ: ಜಗದೀಶ ಶೆಟ್ಟರ ಬಿಜೆಪಿಗೆ ದ್ರೋಹ ಮಾಡಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಹೀಗಾಗಿ ಅವರು ಬಿಜೆಪಿಗೆ ವಾಪಸಾಗುತ್ತೇನೆ ಅಂದ್ರೂ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ಮಾತನಾಡಿದರೂ ಜಗದೀಶ ಶೆಟ್ಟರ ಸೊಪ್ಪು ಹಾಕಲಿಲ್ಲ. ವಿಶ್ವಾಸದ್ರೋಹ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಜಗದೀಶ ಶೆಟ್ಟರ ಅವರನ್ನು ಶತಾಯಗತಾಯ ಸೋಲಿಸಿಯೇ ತೀರುತ್ತೇವೆ ಎಂದರು.

ನಾನೂ ಕೂಡ ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿ ದೊಡ್ಡ ದೊಡ್ಡ ಅಪರಾಧ ಮಾಡಿದ್ದೆ. ಈ ಬಗ್ಗೆ ರಾಜ್ಯದ ಜನತೆ ಬಳಿ ಕ್ಷಮೆಯನ್ನೂ ಕೇಳಿದ್ದೇನೆ. ಆದರೆ, ಶೆಟ್ಟರ ರೀತಿ ಕಾಂಗ್ರೆಸ್ ಸೇರಿರಲಿಲ್ಲ ಎಂದು ಹರಿಹಾಯ್ದರು.

Exit mobile version