Home ನಮ್ಮ ಜಿಲ್ಲೆ ಚಿಕ್ಕಮಗಳೂರು ಚುನಾವಣಾ ಠೇವಣಿಗೆ 25 ಸಾವಿರ ನೀಡಿದ ಚುರುಮುರಿ ವ್ಯಾಪಾರಿ

ಚುನಾವಣಾ ಠೇವಣಿಗೆ 25 ಸಾವಿರ ನೀಡಿದ ಚುರುಮುರಿ ವ್ಯಾಪಾರಿ

0

ಬೆಂಗಳೂರು: ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಚುರುಮುರಿ ವ್ಯಾಪಾರಿಯೊಬ್ಬರು ಚುನಾವಣಾ ಖರ್ಚಿಗೆಂದು 25 ಸಾವಿರ ಹಣ ನೀಡಿದ್ದಾರೆ.
ಈ ಕುರಿತಂತೆ ಕೋಟ ಶ್ರೀನಿವಾಸ ಪೂಜಾರಿ ಶಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಯಾವ ಪಕ್ಷಕ್ಕೂ ಇಲ್ಲದ ಕಾರ್ಯಕರ್ತರ ಶಕ್ತಿ ನಮ್ಮ ಪಕ್ಷಕ್ಕೆ ಇರುವುದಕ್ಕೆ ಇದೂ ಒಂದು ನಿದರ್ಶನವಾಗಿದೆ. ಇಂದು ಚಿಕ್ಕಮಗಳೂರು ಲೋಕಸಭಾ ತೇಗೂರಿನಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ತೇಗೂರು ಗೇಟ್‌ನ ಚುರುಮುರಿ ವ್ಯಾಪಾರಿ ಲೋಕೇಶ್ ಅವರ ಅಂಗಡಿಗೆ ತೆರಳಿದೆವು. ನಮ್ಮ ಪಕ್ಷದ ಕಾರ್ಯಕರ್ತರೂ ಆಗಿರುವ ಲೋಕೇಶ್ ಚುನಾವಣಾ ಠೇವಣಿಗೆ ರೂಪಾಯಿ 25,000.00 ನೀಡಿ ಶುಭಾಶಯ ಕೋರಿದರು. ಅವರ ಪ್ರೀತಿಗೆ ನಿರುತ್ತರನಾದೆ. ಚಿಕ್ಕಮಗಳೂರಿನ ಕಾರ್ಯಕರ್ತರ ಪ್ರೀತಿಯನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Exit mobile version