Home ನಮ್ಮ ಜಿಲ್ಲೆ ಕೊಪ್ಪಳ ಗವಿಸಿದ್ಧೇಶ್ವರ ಅರ್ಬನ್ ಬ್ಯಾಂಕಿನ ೯೧ನೇ ವಾರ್ಷಿಕ ಮಹಾಸಭೆ

ಗವಿಸಿದ್ಧೇಶ್ವರ ಅರ್ಬನ್ ಬ್ಯಾಂಕಿನ ೯೧ನೇ ವಾರ್ಷಿಕ ಮಹಾಸಭೆ

0

೧೦೦ ಕೋಟಿಗೆ ವ್ಯವಹಾರ ಮುಟ್ಟಿಸುವ ಗುರಿ: ಆಡೂರು

ಕೊಪ್ಪಳ: ಶ್ರೀಗವಿಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ಹ್ ಬ್ಯಾಂಕ್ ಲಿ. ಪ್ರಸ್ತುತ ೮೦ ಲಕ್ಷ ರೂ.ಗಿಂತಲೂ ಹೆಚ್ಚು ವ್ಯವಹಾರ ಮಾಡುತ್ತಿದ್ದು, ಇದನ್ನು ೧೦೦ ಕೋಟಿ ರೂ.ಗೆ ಮುಟ್ಟಿಸುವ ಗುರಿ ಹೊಂದಿದ್ದೇವೆ‌ ಎಂದು ಶ್ರೀಗವಿಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ಹ್ ಬ್ಯಾಂಕ್ ಲಿ. ಅಧ್ಯಕ್ಷ ರಾಜಶೇಖರ ಆಡೂರು ಹೇಳಿದರು.

ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಶ್ರೀಗವಿಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ಹ್ ಬ್ಯಾಂಕ್ ಲಿ.ನ ೯೧ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಬ್ಯಾಂಕಿನಲ್ಲಿ ಹಲವು ವಿನೂತನ ಕಾರ್ಯಕ್ರಮ ಮಾಡಲಾಗಿದೆ. ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿ ಶ್ರಮವಹಿಸಲಿದ್ದು, ಇದಕ್ಕೆ ಎಲ್ಲ ಠೇವಣಿದಾರರ ಸಹಕಾರ ಅಗತ್ಯವಾಗಿದೆ ಎಂದರು. ಶಾಸಕ‌ ಕೆ.ರಾಘವೇಂದ್ರ ಹಿಟ್ನಾಳ್ ಭಾಗವಹಿಸಿ, ಶುಭಾರೈಸಿದರು. ಗ್ರಾಹಕರಾದ ಮಂಜುನಾಥ ಗೊಂಡಬಾಳ, ಮಂಜುನಾಥ ಅಂಗಡಿ ಸೇರಿ ೧೦ ಗ್ರಾಹರನ್ನು ಉತ್ತಮ ಗ್ರಾಹಕರೆಂದು ಆಯ್ಕೆ ಮಾಡಿ, ಸನ್ಮಾನಿಸಿ, ಗೌರವಿಸಲಾಯಿತು. ಸದಸ್ಯರ ಮಕ್ಕಳಿಗೆ ಹೆಚ್ಚು ಅಂಕ ಪಡೆದವರಿಗೆ ಸನ್ಮಾನಿಸಲಾಯಿತು. ಬ್ಯಾಂಕಿನ ನಿರ್ದೇಶಕರಾದ ಶಿವರಡ್ಡಿ ಭೂಮಕ್ಕನವರ, ಶಿವಕುಮಾರ ಪಾವಲಿಶೆಟ್ಟರ್, ರಾಜೇಂದ್ರ ಶೆಟ್ಟರ್, ಯುವ ವಕೀಲ ರಾಕೇಶ ಪಾನಘಂಟಿ, ಸಿಇಓ ಜೋಶಿ, ಬ್ಯಾಂಕಿ‌ನ ಪ್ರಧಾನ ವ್ಯವಸ್ಥಾಪಕ ಪ್ರಭಾಕರ್ ಜೋಶಿ, ವ್ಯವಸ್ಥಾಪಕ ಮಲ್ಲಿಕಾರ್ಜುನ್ ಸಿದ್ನೇಕೊಪ್ಪ ಇದ್ದರು.

Exit mobile version