Home ನಮ್ಮ ಜಿಲ್ಲೆ ದಾವಣಗೆರೆ ಖಾಸಗಿ ಕ್ಷಣಗಳ ವಿಡೀಯೋ ವೈರಲ್: ವಿದ್ಯಾರ್ಥಿಗಳಿಬ್ಬರ ಆತ್ಮಹತ್ಯೆ

ಖಾಸಗಿ ಕ್ಷಣಗಳ ವಿಡೀಯೋ ವೈರಲ್: ವಿದ್ಯಾರ್ಥಿಗಳಿಬ್ಬರ ಆತ್ಮಹತ್ಯೆ

0

ದಾವಣಗೆರೆ: ವಿದ್ಯಾರ್ಥಿಗಳಿಬ್ಬರ ಖಾಸಗಿ ಕ್ಷಣಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದರಿಂದ ಮನನೊಂದ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಖಾಸಗಿ ಕಾಲೇಜೊಂದರ ಟೆರೆಸ್ ಮೇಲೆ ಪರಸ್ಪರ ಪ್ರೀತಿಸುತ್ತಿದ್ದ ವಿದ್ಯಾರ್ಥಿಗಳಿಬ್ಬರು ಕಳೆದ ಎರಡು ತಿಂಗಳ ಹಿಂದೆ ಕಳೆದಿದ್ದ ಖಾಸಗಿ ಕ್ಷಣಗಳನ್ನು ಪಕ್ಕದ ಕಟ್ಟದಲ್ಲಿ ಕುಳಿತು ನೋಡುತ್ತಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಆ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಕೆಲವು ಖಾಸಗಿ ಆನ್‌ಲೈನ್ ವೆಬ್‌ಸೈಟ್ ಸುದ್ದಿವಾಹಿನಿಗಳಲ್ಲೂ ಈ ವಿಡಿಯೋ ಪ್ರಸಾರವಾಗಿತ್ತು.
ವಿಡಿಯೋ ಹರಿದಾಡಿರುವುದರಿಂದ ಗೌರವಕ್ಕೆ ಚ್ಯುತಿ ಬಂದಿತೆಂಬ ವಿಷಾದದಿಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶುಕ್ರವಾರ ತಡರಾತ್ರಿ ವಿದ್ಯಾರ್ಥಿಯೂ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ವಿದ್ಯಾರ್ಥಿಗಳಿಬ್ಬರ ಪೋಷಕರು ಪ್ರತ್ಯೇಕವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ತಿಳಿಸಿದ್ದಾರೆ.

Exit mobile version