Home ತಾಜಾ ಸುದ್ದಿ ಕೈಗಾರಿಕಾ ಬೆಳವಣಿಗೆಗಾಗಿ 9 ವಿಷನ್ ಗ್ರೂಪ್‌ಗಳ ರಚನೆ

ಕೈಗಾರಿಕಾ ಬೆಳವಣಿಗೆಗಾಗಿ 9 ವಿಷನ್ ಗ್ರೂಪ್‌ಗಳ ರಚನೆ

0

ಬೆಂಗಳೂರು: ರಾಜ್ಯದಲ್ಲಿ ಉದ್ಯಮಗಳ ಬೆಳವಣಿಗೆಯ ದೃಷ್ಟಿಯಿಂದ ಉದ್ಯಮ ವಲಯಗಳಿಗೆ ವಿಷನ್ ಗ್ರೂಪ್ ರಚಿಸಿ, ಆದೇಶ ಹೊರಡಿಸಲಾಗಿದೆ ಎಂದು ಕೈಗಾರಿಕಾ ಇಲಾಖೆಯ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
9 ಉದ್ಯಮ ವಲಯಗಳಿಗೆ ವಿಷನ್ ಗ್ರೂಪ್‌ಗಳನ್ನು ರಚಿಸಿ, ಆದೇಶ ಹೊರಡಿಸಲಾಗಿದ್ದು ಎಲ್ಲ ವಿಷನ್ ಗ್ರೂಪ್‌ಗಳಿಗೂ ಆಯಾ ವಲಯದ ಪರಿಣಿತ ಉದ್ಯಮಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಈ ವಿಷನ್ ಗ್ರೂಪ್‌ಗಳು ಉದ್ಯಮಗಳ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಗೆ ಅಗತ್ಯ ಮಾರ್ಗದರ್ಶನ ಮಾಡಲಿದ್ದು, ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ಶೋಧಿಸಲಿವೆ.
ವಿಷನ್ ಗ್ರೂಪ್‌ಗಳ ವಿವರ:
ವೈಮಾಂತರಿಕ್ಷ ಮತ್ತು ರಕ್ಷಣೆ, ಮಶೀನ್ ಟೂಲ್ಸ್, ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನಫ್ಯಾಕ್ಚರಿಂಗ್, ಫಾರ್ಮಸುಟಿಕಲ್ಸ್, ಕೋರ್ ಮ್ಯಾನಫ್ಯಾಕ್ಚರಿಂಗ್, ಆಟೋಮೋಟೀವ್/ಎಲೆಕ್ಟ್ರಿಕ್ ವೆಹಿಕಲ್ಸ್, ಇಂಡಸ್ಟ್ರಿ 5.0, ಜವಳಿ ಮತ್ತು ಹಸಿರು ಇಂಧನ ವಲಯಗಳಿಗೆ ಈ ಉಪಕ್ರಮವನ್ನು ಕೈಗೊಂಡಿದೆ ಎಂದಿದ್ದಾರೆ.

https://samyuktakarnataka.in/%e0%b2%ae%e0%b3%86%e0%b2%9f%e0%b3%8d%e0%b2%b0%e0%b3%8b%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ae%e0%b2%bf%e0%b2%a8%e0%b2%bf%e0%b2%b8%e0%b3%8d%e0%b2%9f%e0%b2%b0%e0%b3%8d/

Exit mobile version