Home ಅಪರಾಧ ಕೇಂದ್ರ ಸಚಿವರ ಕಾರು ಅಪಘಾತ

ಕೇಂದ್ರ ಸಚಿವರ ಕಾರು ಅಪಘಾತ

0

ಜಮ್ಮು ಮತ್ತು ಕಾಶ್ಮೀರದ ರಾಂಬನ್‌ ಜಿಲ್ಲೆಯ ಬನಿಹಾಲ್‌ ಪ್ರದೇಶದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಪ್ರಾಯಾಣಿಸುತ್ತಿದ್ದ ಕಾರಿಗೆ ಟ್ರಕ್‌ ಅಪ್ಪಳಿಸಿದರೂ ಸಚಿವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಉಧಮ್‌ಪುರ ಬಳಿ ಸರಕು ತುಂಬಿದ್ದ ಲಾರಿ ಡಿಕ್ಕಿ ಹೊಡೆದಿದೆ. ಆದರೆ ಅಪಘಾತದಲ್ಲಿ ಯಾರೂ ಗಾಯಗೊಂಡಿಲ್ಲ. ಅಪಘಾತ ಸಂಭವಿಸುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿ ಸಚಿವರ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನ ಬಾಗಿಲು ತೆರೆದು ಅದರಲ್ಲಿದ್ದವರನ್ನು ಹೊರತರುವ ಪ್ರಯತ್ನ ಮಾಡಿರುವ ವಿಡಿಯೋ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಕಾನೂನು ಸೇವಾ ಶಿಬಿರದಲ್ಲಿ ಪಾಲ್ಗೊಳ್ಳಲು ಸಚಿವರು ಜಮ್ಮುವಿನಿಂದ ಉಧಮ್‌ಪುರ ಕಡೆಗೆ ತೆರಳುತ್ತಿದ್ದಾಗ ಅಫಘಾತ ಸಂಭವಿಸಿದೆ.

Exit mobile version