Home ನಮ್ಮ ಜಿಲ್ಲೆ ಧಾರವಾಡ ಕೇಂದ್ರಕ್ಕೆ ಸಿದ್ದು ಸರಕಾರದಿಂದ ಅಸಹಕಾರ

ಕೇಂದ್ರಕ್ಕೆ ಸಿದ್ದು ಸರಕಾರದಿಂದ ಅಸಹಕಾರ

0

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಭಿಮಾನಿ ಕರ್ನಾಟಕ ಎಂದು ಮಾತನಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರಕ್ಕೆ ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂಬುದನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರಾಮಾಣಿಕವಾಗಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಸರಕಾರ ರೂಪಿಸಿರುವ ಕಾನೂನುಗಳೇ ಪಾಲನೆ ಆಗುತ್ತಿದೆ. ಘಮಂಡಿ ಘಟಬಂಧನ ಉಳಿಸಿಕೊಳ್ಳಲು ಡಿಎಂಕೆ ಪರವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರಚಾರ ಮಾಡುತ್ತಾರೆ. ಆದರೆ, ಮೇಕೆದಾಟು ಯೋಜನೆ ಬಗ್ಗೆ ಡಿಎಂಕೆ ಜೊತೆಗೆ ಚರ್ಚೆ ಏಕೆ ಮಾಡುತ್ತಿಲ್ಲ? ನೆಲ, ಜಲ ಸಂರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಜನ ನಿಮ್ಮ ನಾಟಕ ನಂಬುವುದಿಲ್ಲ. ನಮ್ಮನ್ನು ಜನ ಇಲ್ಲಿ ಸೋಲಿಸಿರಬಹುದು ಆದರೆ, ದೇಶದಲ್ಲಿ ಬಿಜೆಪಿಯ ಕೈಹಿಡಿದಿದ್ದಾರೆ. ಕೇಂದ್ರದಲ್ಲಿ ನಿಮ್ಮದು ನಾಯಕತ್ವ ಇಲ್ಲದ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು.

Exit mobile version