Home ನಮ್ಮ ಜಿಲ್ಲೆ ಚಿಕ್ಕಮಗಳೂರು ಕೆರೆಗೆ ಬಿದ್ದ ಕಾರು: ಓರ್ವ ಸಾವು

ಕೆರೆಗೆ ಬಿದ್ದ ಕಾರು: ಓರ್ವ ಸಾವು

0

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದ ಘಟನೆ ಅಂಬಳೆ ಕೆರೆಯಲ್ಲಿ ನಡೆದಿದೆ. ದಿನೇಶ್ (33) ಕಾರಿನೊಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತೊರ್ವ ಸಂತೋಷ್ ಪಾರಾಗಿದ್ದಾರೆ.
ಚಿಕ್ಕಮಗಳೂರಿನಿಂದ ಅಂಬಳೆ ಗ್ರಾಮಕ್ಕೆ ಇಬ್ಬರು ಕಾರಿನಲ್ಲಿ ತೆರಳುತ್ತಿದ್ದರು. ಇಂದು ಬೆಳಗ್ಗಿನ ಜಾವ ಅವರಿದ್ದ ಕಾರು ಏಕಾಏಕಿ ಕೆರೆಗೆ ಬಿದ್ದಿದೆ. ಪರಿಣಾಮ ದಿನೇಶ್ ಅಲ್ಲೇ ಸಾವನ್ನಪ್ಪಿದ್ದಾರೆ. ದಿನೇಶ್ ಹಾಗೂ ಸಂತೋಷ್ ಅಂಬಳೆ ಮೂಲದವರು. ದಿನೇಶ್ ಚಿಕ್ಕಮಗಳೂರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಅಗ್ನಿ ಶಾಮಕ ದಳ ಹಾಗೂ ಗ್ರಾಮಾಂತರ ಪೊಲೀಸರ ನೇತೃತ್ವದಲ್ಲಿ ಸಂತೋಷ್ ಮೃತದೇಹವನ್ನ ನೀರಿನಿಂದ ಹೊರ ತೆಗೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version