Home ತಾಜಾ ಸುದ್ದಿ ಕಾವೇರಿಗಾಗಿ ಉತ್ತರ ಕರ್ನಾಟಕವೂ ನಿಮ್ಮ ಜೊತೆ ನಿಲ್ಲಲಿದೆ

ಕಾವೇರಿಗಾಗಿ ಉತ್ತರ ಕರ್ನಾಟಕವೂ ನಿಮ್ಮ ಜೊತೆ ನಿಲ್ಲಲಿದೆ

0

ಬೆಂಗಳೂರು: ಕಾವೇರಿಗಾಗಿ ಉತ್ತರ ಕರ್ನಾಟಕವೂ ನಿಮ್ಮ ಜೊತೆ ನಿಲ್ಲಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು “ನಾನು ಕನ್ನಡ ಪರ ಸಂಘಟನೆಗಳು ಹಾಗು ರೈತ ಸಂಘಟನೆಗಳಲ್ಲಿ ಮನವಿ ಮಾಡುತ್ತೇನೆ, ನಾಡು ನುಡಿಗಾಗಿ ಎಲ್ಲರೂ ಒಟ್ಟಾಗಿ ಒಂದೇ ದಿನ ಹೋರಾಟ ಮಾಡಿ. ನಿಮ್ಮ ಜೊತೆ ನಾವಿದ್ದೇವೆ. ಎರಡೆರಡು ಸಂಘಟನೆಗಳು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಬೇಡಿ. ಕಾವೇರಿಗಾಗಿ ಉತ್ತರ ಕರ್ನಾಟಕವೂ ನಿಮ್ಮ ಜೊತೆ ನಿಲ್ಲಲಿದೆ, ನಮ್ಮ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ನೀವು ನಮ್ಮೊಂದಿಗೆ ನಿಲ್ಲಿ. ಸಂಪೂರ್ಣ ಕರ್ನಾಟಕದ ನಾಡು ನುಡಿಗಾಗಿ ನಾವೆಲ್ಲರೂ ಒಟ್ಟಿಗೆ ನಿಲ್ಲೋಣ ಎಂದು ವಿನಂತಿಸಿದ್ದಾರೆ.

Exit mobile version