Home ನಮ್ಮ ಜಿಲ್ಲೆ ಧಾರವಾಡ ಕಲಘಟಗಿ: ಪಿಎಫ್ಐ ಸಂಘಟನೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇಬ್ಬರ ಬಂಧನ

ಕಲಘಟಗಿ: ಪಿಎಫ್ಐ ಸಂಘಟನೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇಬ್ಬರ ಬಂಧನ

0
PFI

ಹುಬ್ಬಳ್ಳಿ: ಹಿಂದೆ ಪಿಎಫ್ಐ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ, ಹಿಜಾಬ್ ವಿವಾದ ನಡೆದಾಗ, ನೂಪುರ ಶರ್ಮಾ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇಬ್ಬರನ್ನು ಕಲಘಟಗಿ ಪೊಲೀಸರು ಮಿಶ್ರಿಕೋಟೆ ಗ್ರಾಮದಲ್ಲಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಸಿಕಂದರ ಶಾಲಗಾರ(27), ಉಮರ್ ಫಾರೂಕ್ ಕುಂಬಿ(24) ಬಂಧಿತರು. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಕಲಘಟಗಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಬಂಧಿತ ಸಿಕಂದರ್ ವೆಲ್ಡಿಂಗ್ ಕೆಲಸಗಾರನಾಗಿದ್ದರೆ ಉಮರ್ ಫಾರೂಕ್ ಟೇಲರ್ ಕೆಲಸಗಾರನಾಗಿದ್ದಾನೆ ಎಂದು ಪೊಲೀಸರು ದಾಖಲಿಸಿಕೊಂಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Exit mobile version