Home ತಾಜಾ ಸುದ್ದಿ ಇಳಕಲ್‌ನಲ್ಲಿ ಬೆಳಗಿನ ಜಾವವೇ ಜೆಸಿಬಿ ಸದ್ದು

ಇಳಕಲ್‌ನಲ್ಲಿ ಬೆಳಗಿನ ಜಾವವೇ ಜೆಸಿಬಿ ಸದ್ದು

0
ಸಾಂದರ್ಭಿಕ ಚಿತ್ರ

ಇಳಕಲ್ : ಇಲ್ಲಿನ ಬಸ್ ನಿಲ್ದಾಣ ಎದುರಿಗೆ ಇರುವ ಬೀದಿ ಬದಿ ವ್ಯಾಪಾರ ಮಾಡುವ ಆರು ಅಂಗಡಿಗಳನ್ನು ನಗರಸಭೆಯ ಜೆಸಿಬಿ ಬೆಳಗಿನ ಜಾವವೇ ಆಗಮಿಸಿ ಖಾಲಿ ಮಾಡಿಸಿತು.
ಪೋಲಿಸ್ ಠಾಣೆಯ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಇಂದಿರಾ ಕ್ಯಾಂಟೀನ್ ಮುಂದುಗಡೆ ಇದ್ದ ಈ ಆರು ಅಂಗಡಿಗಳನ್ನು ಖಾಲಿ ಮಾಡಲು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಆದೇಶ ಮಾಡಿದ್ದರು.ಸದ್ಯ ಇಂದಿರಾ ಕ್ಯಾಂಟೀನ್ ಒಂದು ರೂಪಕ್ಕೆ ಬಂದ ಹಿನ್ನೆಲೆಯಲ್ಲಿ ಅಲ್ಲಿದ್ದ ಒಂದು ಹೂವಿನ ಅಂಗಡಿ ಒಂದು ಶ್ಯೂ ಅಂಗಡಿ ಸೇರಿದಂತೆ ಆರು ಅಂಗಡಿಗಳನ್ನು ನಗರಸಭೆಯ ಆರೋಗ್ಯ ಇಲಾಖೆಯ ಸಿಬ್ಬಂದಿ ತೆರವು ಮಾಡಿಸಿತು. ಬಸ್ ನಿಲ್ದಾಣ ಎದುರಿಗೆ ನಡೆದ ಈ ಕಾರ್ಯಾಚರಣೆಯನ್ನು ಸಾರ್ವಜನಿಕರು ಬೆಳಗಿನ ಜಾವ ಕುತೂಹಲದಿಂದ ನೋಡುತ್ತಿದ್ದರು.

Exit mobile version