ರಾಣೇಬೆನ್ನೂರು: ಪತ್ನಿ ಆತ್ಮಹತ್ಯೆಗೆ ಪ್ರಯತ್ನಿಸಿದ ವಿಷಯ ತಿಳಿದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ವಡ್ಡರ(೩೫) ಎಂಬುವರೇ ಮೃತಪಟ್ಟವರು. ಕೌಟುಂಬಿಕ ಕಲಹದಿಂದ ಬೇಸತ್ತು ಆತನ ಪತ್ನಿ ಲಕ್ಷ್ಮವ್ವ ಮಂಜುನಾಥ ವಡ್ಡರ ಸೋಮವಾರ ವಿಷ ಸೇವಿಸಿದ್ದಳು. ತಕ್ಷಣ ಗ್ರಾಮಸ್ಥರು ಆಕೆಯನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಅಲ್ಲಿನ ವೈದ್ಯರು ಆಕೆಗೆ ಚಿಕಿತ್ಸೆ ನೀಡಿ ೨೪ ಗಂಟೆ ನಿಗಾದಲ್ಲಿ ಇರಿಸಿದ್ದರು. ವಿಷಯ ತಿಳಿದ ಆಕೆಯ ಪತಿ ಮಂಜುನಾಥ ಮಾದಾಪೂರ ಗ್ರಾಮದಲ್ಲಿರುವ ಅಲ್ತಾಫ್ ಬಲೆಭಾಯಿ ಎಂಬುವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಪತ್ನಿ ಲಕ್ಷ್ಮವ್ವ ಚೇತರಿಸಿಕೊಂಡಿದ್ದಾಳೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.