Home ತಾಜಾ ಸುದ್ದಿ ಅಲ್ಪಸಂಖ್ಯಾತ ಕೋಟಾದಡಿ ನನಗೂ ಸಚಿವ ಸ್ಥಾನ ನೀಡಿ

ಅಲ್ಪಸಂಖ್ಯಾತ ಕೋಟಾದಡಿ ನನಗೂ ಸಚಿವ ಸ್ಥಾನ ನೀಡಿ

0

ಬೆಳಗಾವಿ: ಅಲ್ಪಸಂಖ್ಯಾತ ಕೋಟಾದಲ್ಲಿ ನನಗೂ ಮಂತ್ರಿ ಸ್ಥಾನ ಕೊಡಿ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್(ರಾಜೂ) ಸೇಠ್ ಒತ್ತಾಯಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ೧೮ ಮತಕ್ಷೇತ್ರಗಳಿವೆ. ಇಷ್ಟು ದೊಡ್ಡ ಜಿಲ್ಲೆ ಮತ್ತೊಂದು ಸಚಿವ ಸ್ಥಾನ ಕೊಡಬೇಕು. ಬೆಂಗಳೂರಿನಂತ ದೊಡ್ಡ ಜಿಲ್ಲೆಗೆ ಮೂರು, ನಾಲ್ಕು ಸಚಿವ ಸ್ಥಾನ ಕೊಟ್ಟಿದೀರಿ. ಬೆಳಗಾವಿಗೆ ಎರಡು ಸ್ಥಾನ ಯಾಕೆ ಎಂದು ಪ್ರಶ್ನೆ ಮಾಡಿದ ಅವರು, ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ಆಗಿರುವೆ. ನಾನು ಯಾಕೆ ಸಚಿವ ಸ್ಥಾನ ಕೇಳಬಾರದು. ಯಾಕೆ ಉತ್ತರ ಕರ್ನಾಟಕದ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಕೊಡುವುದಿಲ್ಲ ಎಂದು ನಮ್ಮ ಸಮುದಾಯದ ನನಗೆ ಕೇಳುತ್ತಿದೆ. ನಮ್ಮ ಜಿಲ್ಲಾ ಸಚಿವರು, ನಮ್ಮ ಲೀಡರ್ ಸತೀಶ್ ಜಾರಕಿಹೊಳಿ ಅವರನ್ನ ನಾನು ಕೇಳುತ್ತೇನೆ. ನನ್ನ ಹೆಸರನ್ನು ಅವರು ಶಿಫಾರಸು ಮಾಡಿದ್ರೆ ನಾನು ವರಿಷ್ಠರಿಗೆ ಕೇಳುತ್ತೇನೆ. ನಾನು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

Exit mobile version