Home ಅಪರಾಧ ಅಪಘಾತ: ಬೈಕ್‌ ಸವಾರ ಸಾವು

ಅಪಘಾತ: ಬೈಕ್‌ ಸವಾರ ಸಾವು

0

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಜ್ಯೋತಿನಗರದಲ್ಲಿ ಶನಿವಾರ ರಾತ್ರಿ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಕಾಶಿಪಟ್ಣದ ಉಮೇಶ್(49) ಮೃತಪಟ್ಟ ವ್ಯಕ್ತಿ. ಉಮೇಶ್ ಮೂಡುಬಿದಿರೆ ಕಡೆಯಿಂದ ಮಹಾವೀರ ಕಾಲೇಜು ರಸ್ತೆಗೆ ಹೋಗುತ್ತಿದ್ದು, ಜ್ಯೋತಿನಗರದಲ್ಲಿ ಕ್ರಾಸ್ ಆಗಿ ಮಸೀದಿ ರಸ್ತೆ ಹೋಗುವ ಸಂದರ್ಭ ಬಂಟ್ವಾಳದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಉಮೇಶ್ ಅವರನ್ನು ತಕ್ಷಣ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version