Home ತಾಜಾ ಸುದ್ದಿ ಅಡಚಣೆ ಇದ್ದರೆ ಶಾಸಕರು ಸಿಎಂ ಗಮನಕ್ಕೆ ತರಲಿ

ಅಡಚಣೆ ಇದ್ದರೆ ಶಾಸಕರು ಸಿಎಂ ಗಮನಕ್ಕೆ ತರಲಿ

0

ಬಾಗಲಕೋಟೆ: ಯಾವುದಾದರೂ ಅಡಚಣೆ ಇದ್ದಾಗ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತರುವುದು ತಪ್ಪಲ್ಲ. ನಮ್ಮ ಜಿಲ್ಲೆಯಲ್ಲೂ ಯಾವುದೇ ಶಾಸಕರು ಅಸಮಾಧಾನಗೊಂಡಿದ್ದರೆ ಅವರೊಂದಿಗೆ ಚರ್ಚಿಸಲು ತಾವು ಸಿದ್ಧರಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿ ಕೆಡಿಪಿ ಸಭೆಗೂ ಮುನ್ನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಡಚಣೆಗಳು ಇದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತರಬಹುದು. ಇಲ್ಲಿಯೂ ಯಾರಾದರೂ ಇದ್ದರೆ ನಾನು ಖುದ್ದು ಮಾತನಾಡುತ್ತೇನೆ. ನಮ್ಮಲ್ಲಿ ಅಂಥ ಸಮಸ್ಯೆಗಳು ಇಲ್ಲ ಎಂದರು.

Exit mobile version