Home ನಮ್ಮ ಜಿಲ್ಲೆ ಹೊರಟ್ಟಿ ಜೆಡಿಎಸ್‌ಗೆ ಬಂದರೆ ಅದೇ ಗೌರವ, ಸ್ಥಾನಮಾನ; ಸಿ.ಎಂ ಇಬ್ರಾಹಿಂ

ಹೊರಟ್ಟಿ ಜೆಡಿಎಸ್‌ಗೆ ಬಂದರೆ ಅದೇ ಗೌರವ, ಸ್ಥಾನಮಾನ; ಸಿ.ಎಂ ಇಬ್ರಾಹಿಂ

0
IBRAHIM

ಹುಬ್ಬಳಿ: ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮತ್ತೆ ಜೆಡಿಎಸ್‌ಗೆ ಬಂದರೆ ಅದೇ ಹಿಂದಿನ ರೀತಿಯ ಗೌರವ, ಸ್ಥಾನಮಾನ ಸಿಗಲಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಅವರು ಮತ್ತೆ ವಿಧಾನ ಪರಿಷತ್ ಸಭಾಪಿತ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಸಭಾಪತಿ ಸ್ಥಾನ ಈವರೆಗೂ ದೊರೆತಿಲ್ಲ. ಅವರು ಬಿಜೆಪಿಯಿಂದ ಮರಳಿ ಜೆಡಿಎಸ್‌ಗೆ ಬಂದರೆ ಈ ಹಿಂದಿನಂತೆಯೇ ಅವರಿಗೆ ಸೂಕ್ತ ಸ್ಥಾನಮಾನ ಹಾಗೂ ಗೌರವ ಸಿಗಲಿದೆ ಎಂದರು.

Exit mobile version