Home ತಾಜಾ ಸುದ್ದಿ ಬಿಎಸ್‌ವೈಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಧಿಕ್ಕಾರ

ಬಿಎಸ್‌ವೈಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಧಿಕ್ಕಾರ

0
ಯಡಿಯೂರಪ್ಪ

ಅಥಣಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಪರ ಪ್ರಚಾರಕ್ಕಾಗಿ ಇಂದು ಅಥಣಿಗೆ ಆಗಮಿಸಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಲಕ್ಷ್ಮಣ ಸವದಿ ಪರ ಹಾಗೂ ಬಿಎಸ್‌ವೈ ವಿರುದ್ಧ ಘೋಷಣೆ ಕೂಗಿದ್ದರಿಂದ ಹೆಲಿಪ್ಯಾಡ್ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಮ್ಮ ನಾಯಕ ಲಕ್ಷ್ಮಣ ಸವದಿಗೆ ಟಿಕೆಟ್ ತಪ್ಪಿಸಿದ ಯಡಿಯೂರಪ್ಪನವರು ಅಥಣಿಗೆ ಬಂದಿರೋದಕ್ಕೆ ಧಿಕ್ಕಾರ ಎಂದು ಆಕ್ರೋಶ ಹೊರಹಾಕಿದರು.
ಪಟ್ಟಣದಲ್ಲಿ ಹೆಲಿಕಾಪ್ಟರ್ ಇಳಿಯುವ ಹೆಲಿಪ್ಯಾಡ್ ಬಳಿ ಸೇರಿದ್ದ ನೂರಾರು ಕಾರ್ಯಕರ್ತರು ಯಡಿಯೂರಪ್ಪ ಬರುತ್ತಿದ್ದಂತೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ತಲೆಕೆಡಿಸಿಕೊಳ್ಳದ ಬಿಎಸ್‌ವೈ ಹೆಲಿಕಾಪ್ಟರ್ ಇಳಿದು ಕಾರಲ್ಲಿ ಸಭೆ ನಡೆಯುವ ಸ್ಥಳದತ್ತ ತೆರಳಿದರು.

Exit mobile version