Home ನಮ್ಮ ಜಿಲ್ಲೆ ಕಲಬುರಗಿ ಕಲ್ಯಾಣ ಕರ್ನಾಟಕಕ್ಕೆ ಇನ್ನೂ ನಾಲ್ಕೈದು ಮಂತ್ರಿ ಸ್ಥಾನ

ಕಲ್ಯಾಣ ಕರ್ನಾಟಕಕ್ಕೆ ಇನ್ನೂ ನಾಲ್ಕೈದು ಮಂತ್ರಿ ಸ್ಥಾನ

0

ಕಲಬುರಗಿ: ಸದ್ಯದಲ್ಲಿಯೇ ಸಂಪುಟ ವಿಸ್ತರಣೆ ನಡೆಯಲಿದ್ದು, ಕಲ್ಯಾಣ ಕರ್ನಾಟಕಕ್ಕೆ ನಾಲ್ಕೈದು ಸ್ಥಾನ, ಮುಂಬೈ ಕರ್ನಾಟಕಕ್ಕೆ ನಾಲ್ಕೈದು ಸ್ಥಾನ ಸಿಗಲಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ತಮ್ಮ ನಿವಾಸದಲ್ಲಿ ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಗೆಲುವು ಕರ್ನಾಟಕ ಜನತೆಯ ಗೆಲುವು ಆಗಿದೆ ಎಂದರು. ಈ ಭ್ರಷ್ಟ ಸರಕಾರ ತೆಗೆದು ಹಾಕಲು ಜ‌ನ ನಿರ್ಧಾರ ಕೈಗೊಂಡಿದ್ದರು.. ಅದರ ಫಲ ನಮಗೆ ಸಿಕ್ಕಿದೆ. ನಾವು ನೀಡಿರುವ ಭರವಸೆ ಈಡೇರಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಸಿಎಂ, ಡಿಸಿಎಂ ಎಲ್ಲಾ ಸೇರಿ ಐದು ಗ್ಯಾರೆಂಟಿ ಈಡೇರಿಸಲುವ ಬಗ್ಗೆ ನಿರ್ಣಯ ಕೈಗೊಂಡಿದ್ದು ಸ್ವಾಗತಾರ್ಹ ಎಂದರು.
ಇವು ನಮ್ಮ ಗೆಲುವಿಗೆ ಕಾರಣವಾದ ಗ್ಯಾರೆಂಟಿಗಳು ಈ ಗ್ಯಾರೆಂಟಿಗಳನ್ನು ಅನುಷ್ಠಾನ ತರಲೇಬೇಕು. ಸರಕಾರ ಈ ದಿಕ್ಕಿನಲ್ಲಿ ನಿರ್ಣಯ ಕೈಗೊಂಡಿದೆ. ಸದ್ಯದಲ್ಲೇ ಅನುಷ್ಠಾನಕ್ಕೆ ತಂದು ಜನರಿಗೆ ತಲುಪಿಸಲಿದ್ದೇವೆ ಎಂದರು.

Exit mobile version