‘ಕರಾವಳಿ’ ಟ್ರೇಲರ್ ರಿಲೀಸ್ ಗಲಾಟೆ; ಪ್ರಜ್ವಲ್ ಆಪ್ತರ ವಿರುದ್ಧ FIR

ಬೆಂಗಳೂರು: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾರ್ಯಕ್ರಮದ ವೇಳೆ ರಂಪಾಟ ನಡೆಸಿ, ಚಿತ್ರದ ನಿರ್ದೇಶಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದಡಿ ನಟ ಪ್ರಜ್ವಲ್ ದೇವರಾಜ್ ಅವರ ಆಪ್ತರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಗುರುದತ್ ಗಾಣಿಗ ಫಿಲ್ಮ್ಸ್‌ನ ಕಾರ್ಯನಿರ್ವಾಹಕರು ನೀಡಿದ ದೂರಿನ ಆಧಾರದ ಮೇಲೆ ದಿಲೀಪ್, ಅವಿನಾಶ್ ಹಾಗೂ ನಂದಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ … Continue reading ‘ಕರಾವಳಿ’ ಟ್ರೇಲರ್ ರಿಲೀಸ್ ಗಲಾಟೆ; ಪ್ರಜ್ವಲ್ ಆಪ್ತರ ವಿರುದ್ಧ FIR