ಕಾಂತಾರಾ ಚಾಪ್ಟರ್-1ಗೆ ಅಂತಾರಾಷ್ಟ್ರೀಯ ಗೌರವ: ರಿಷಬ್ ಶೆಟ್ಟಿಗೆ ಎರಡು ಪ್ರಶಸ್ತಿ

ಪಣಜಿ: 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಕನ್ನಡದ ಹೆಮ್ಮೆಯ ಚಿತ್ರ ʻಕಾಂತಾರಾ ಚಾಪ್ಟರ್-1’ಗೆ ಎರಡು ಪ್ರಶಸ್ತಿಗಳು ಲಭಿಸಿವೆ. ಚಿತ್ರದ ನಟನೆ ಮತ್ತು ನಿರ್ದೇಶನಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಸ್ಪೆಷಲ್ ಮೆನ್ಷನ್ ಅವಾರ್ಡ್ ಹಾಗೂ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗೋವಾದ ಬಾಂಬೋಲಿಂ ಬಳಿಯ ಶ್ಯಾಮಪ್ರಸಾದ್ ಮುಖರ್ಜಿ ಸ್ಟೇಡಿಯಂನಲ್ಲಿ ಶನಿವಾರ ಸಂಜೆ ನಡೆದ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್ ಶೆಟ್ಟಿ, ಗೋವಾದಲ್ಲಿ ನಡೆಯುವ ಅಂತಾರಾಷ್ಟ್ರೀಯ … Continue reading ಕಾಂತಾರಾ ಚಾಪ್ಟರ್-1ಗೆ ಅಂತಾರಾಷ್ಟ್ರೀಯ ಗೌರವ: ರಿಷಬ್ ಶೆಟ್ಟಿಗೆ ಎರಡು ಪ್ರಶಸ್ತಿ