ನನಗೆ ಸಿಎಂ ಆಗುವ ಅರ್ಹತೆ ಇದೆ, ಕಾರ್ಯಾಧ್ಯಕ್ಷ ಹುದ್ದೆ ಬೇಡ

ವಿಜಯಪುರ: ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಅರ್ಹತೆ ಇರುವ ವ್ಯಕ್ತಿ ನಾನು. ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯಂತಹುದ್ದೆಲ್ಲ ನನ್ನ ಯೋಗ್ಯತೆಗೆ ಸರಿಯಾದ ಹುದ್ದೆಯಲ್ಲ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಿದ್ಧಾಂತವೇ ನನ್ನ ಉಸಿರು, ಇದು ನನ್ನ ಬದ್ಧತೆ, ಆದರೆ ಕಾರ್ಯಾಧ್ಯಕ್ಷನಾಗಲಾರೆ ಎಂದು ಸ್ಪಷ್ಟಪಡಿಸಿದರು. ಹೋರಾಟಕ್ಕಾಗಿ ಸಿದ್ದರಾಮಯ್ಯ-ಜಾರಕಿಹೊಳಿ ಅವರನ್ನೂ ಕಾಯಲ್ಲ. ಅವಕಾಶ ವಂಚಿತರು ನಿತ್ಯ ಹೋರಾಡುತ್ತಾರೆ. ಸ್ವಾತಂತ್ರ್ಯ ಹಾಗೂ ಸಂವಿಧಾನದ ಆಶಯಗಳನ್ನು ಸಂಪೂರ್ಣಗೊಳಿಸಬೇಕು, ಈ ವಿಷಯದಲ್ಲಿ ಕಾಂಗ್ರೆಸ್ ಎಡವಿದರೆ ಕಾಂಗ್ರೆಸ್‌ಗೂ ಅಪಾಯ ತಪ್ಪಿದಲ್ಲ ಎಂದು … Continue reading ನನಗೆ ಸಿಎಂ ಆಗುವ ಅರ್ಹತೆ ಇದೆ, ಕಾರ್ಯಾಧ್ಯಕ್ಷ ಹುದ್ದೆ ಬೇಡ