ಕ್ಯಾಸಲ್ ರಾಕ್‌ನಿಂದ ಗೋವಾಕ್ಕೆ ಪ್ರಕೃತಿ ಸೊಬಗಿನ ರೈಲು ಪಯಣ

ದಾಂಡೇಲಿ (ಉತ್ತರಕನ್ನಡ): ಮಳೆಗಾಲ ಆರಂಭವಾಗುತ್ತಿದ್ದಂತೆ ಪಶ್ಚಿಮ ಘಟ್ಟಗಳ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ಹಸಿರಿನಿಂದ ಕಂಗೊಳಿಸುವ ಬೆಟ್ಟ-ಗುಡ್ಡಗಳು, ಮಂಜಿನ ಮುಸುಕು, ಧುಮ್ಮಿಕ್ಕಿ ಹರಿಯುವ ಜಲಧಾರೆಗಳು ಹಾಗೂ ದಟ್ಟ ಕಾಡಿನ ನಡುವೆ ಸಾಗುವ ರೈಲು ಪ್ರಯಾಣ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಜೋಯಡಾ ತಾಲೂಕಿನ ಕ್ಯಾಸಲ್ ರಾಕ್ ರೈಲು ನಿಲ್ದಾಣದಿಂದ ಗೋವಾದತ್ತ ಸಾಗುವ ರೈಲು ಪಯಣ ಇಂತಹ ಪ್ರಕೃತಿ ಸೌಂದರ್ಯದ ಅಪೂರ್ವ ಅನುಭವವನ್ನು ನೀಡುತ್ತದೆ. ಕ್ಯಾಸಲ್ ರಾಕ್‌ನಿಂದ ರೈಲು ಹೊರಟ ಬಳಿಕ ಪಶ್ಚಿಮ ಘಟ್ಟಗಳ ದಟ್ಟ ಕಾಡು ಮತ್ತು ಬೆಟ್ಟ-ಕಣಿವೆಗಳ … Continue reading ಕ್ಯಾಸಲ್ ರಾಕ್‌ನಿಂದ ಗೋವಾಕ್ಕೆ ಪ್ರಕೃತಿ ಸೊಬಗಿನ ರೈಲು ಪಯಣ