23 ಲಕ್ಷ ರೂ. ವಂಚನೆ: ದಂಪತಿ ಬಂಧನ

ಉಡುಪಿ: ಪೆರ್ಡೂರು ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಹಣವನ್ನು ದುರ್ಬಳಕೆ ಮಾಡಿ ಸುಮಾರು 23 ಲಕ್ಷ ರೂ. ವಂಚಿಸಿದ ಆರೋಪದಡಿ ಬರಹಗಾರ್ತಿ ಸುಗಂಧಿ ಹಾಗೂ ಆಕೆಯ ಪತಿ ಸಂತೋಷ್‌ನನ್ನು ಹಿರಿಯಡಕ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿಯಾಗಿ ಸುಗಂಧಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ 2023ರಿಂದ 2025ರ ವರೆಗೆ ಸದಸ್ಯರಿಂದ ಸಂಗ್ರಹಿಸಿದ ಸಾಲ ಮರುಪಾವತಿ ಹಣವನ್ನು ರಿಜಿಸ್ಟರ್‌ನಲ್ಲಿ ದಾಖಲಿಸಿ, ಅದನ್ನು ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡದೆ ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ. ಜೊತೆಗೆ … Continue reading 23 ಲಕ್ಷ ರೂ. ವಂಚನೆ: ದಂಪತಿ ಬಂಧನ