ಹುಲಿ-ಸಿಂಹಧಾಮದ ಕಳೆ ಹೆಚ್ಚಿಸಿದ್ದ ‘ದಶಮಿ’ ಇನ್ನಿಲ್ಲ

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಪ್ರಮುಖ ಆಕರ್ಷಣೆಯಾಗಿದ್ದ 17 ವರ್ಷದ ಹೆಣ್ಣು ಹುಲಿ ದಶಮಿ ವಯೋಸಹಜ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಭಾನುವಾರ ಬೆಳಿಗ್ಗೆ ಮೃತಪಟ್ಟಿದೆ. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ್ ಅವರು, ಮಾಹಿತಿ ನೀಡಿದ್ದು, ವಯೋಸಹಜ ಕಾಯಿಲೆಯಿಂದ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಕಳೆದ 10 ದಿನಗಳಿಂದ ದಶಮಿಗೆ ಚಿಕಿತ್ಸೆ ನೀಡಲಾಗುತಿತ್ತು. 2009ರ ಅಕ್ಟೋಬರ್ 16 ರಂದು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿಯೇ ಜನಿಸಿದ್ದ ದಶಮಿ, 17 ವರ್ಷಗಳಿಂದ ಸಫಾರಿಯಲ್ಲಿದ್ದು, ದೇಶ-ವಿದೇಶಗಳಿಂದ ಆಗಮಿಸುತ್ತಿದ್ದ ಪ್ರವಾಸಿಗರ ಗಮನ ಸೆಳೆಯುತಿತ್ತು. … Continue reading ಹುಲಿ-ಸಿಂಹಧಾಮದ ಕಳೆ ಹೆಚ್ಚಿಸಿದ್ದ ‘ದಶಮಿ’ ಇನ್ನಿಲ್ಲ