PhonePe ಮೂಲಕ ಲಂಚ: PDO ಹಾಗೂ ಪತಿ ಲೋಕಾಯುಕ್ತ ಬಲೆಗೆ

ರಾಯಚೂರು: ನಿವೇಶನಗಳಿಗೆ ಖಾತೆ ಮಾಡಿಕೊಡಲು ಭಾರೀ ಪ್ರಮಾಣದ ಲಂಚದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಒಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ರಾಯಚೂರು ತಾಲ್ಲೂಕಿನಲ್ಲಿ ಬುಧವಾರ ನಡೆದಿದೆ. ರಾಯಚೂರು ತಾಲ್ಲೂಕಿನ ಬೀಜನಗೆರಾ ಗ್ರಾಮ ಪಂಚಾಯಿತಿಯ ಪಿಡಿಒ ಲಕ್ಷ್ಮೀ ಅವರು, ಉಮ್ರಾಳದೊಡ್ಡಿ ಗ್ರಾಮದ ನಿವಾಸಿ ಮಹೆಬೂಬ್ ಎಂಬುವವರಿಂದ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ಪಿಡಿಒ ಲಕ್ಷ್ಮೀ ಹಾಗೂ ಅವರ ಪತಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. … Continue reading PhonePe ಮೂಲಕ ಲಂಚ: PDO ಹಾಗೂ ಪತಿ ಲೋಕಾಯುಕ್ತ ಬಲೆಗೆ