ಇಲ್ಲೇ ಕಾಯುತ್ತೇನೆ; ಸಿಎಂ ಅಥವಾ ಅಧಿಕಾರಿಗಳಾದರೂ ಬರಲಿ

ಮದ್ದೂರು: ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದಿರುವ ಎರಡು ಪತ್ರಗಳಿಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೂ ಜೂನ್ 27ರಂದು ಭೈರಮಂಗಲದಲ್ಲಿ ಸಂಜೆವರೆಗೂ ಕಾಯುತ್ತೇನೆ. ಮುಖ್ಯಮಂತ್ರಿ ಬರಲು ಸಾಧ್ಯವಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನಾದರೂ ಚರ್ಚೆಗೆ ಕಳುಹಿಸಲಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೈರಮಂಗಲಕ್ಕೆ ಜೂನ್‌ 27ರಂದು ಭೇಟಿ ನೀಡುವ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದೆ. ಕಾಂಗ್ರೆಸ್ ಸರ್ಕಾರ ಜನಾಭಿಪ್ರಾಯದ ವಿರುದ್ಧ … Continue reading ಇಲ್ಲೇ ಕಾಯುತ್ತೇನೆ; ಸಿಎಂ ಅಥವಾ ಅಧಿಕಾರಿಗಳಾದರೂ ಬರಲಿ