ಮಕ್ಕಳ ಕಳ್ಳಿಯೆಂದು ಅನುಮಾನಿಸಿ ಹಿಗ್ಗಾಮುಗ್ಗ ಥಳಿತ

ಕೊಪ್ಪಳ: ಮಕ್ಕಳ ಕಳ್ಳಿ ಎಂದು ಅನುಮಾನಿಸಿ ಮಹಿಳೆಯೊಬ್ಬಳನ್ನು ಹಿಗ್ಗಾಮುಗ್ಗ ಥಳಿಸಿದ ಘಟನೆ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದಲ್ಲಿ ಗುರುವಾರ ನಡೆದಿದೆ. ಯಲಬುರ್ಗಾ ತಾಲೂಕಿನ ಬುಡಕುಂಟಿ ಗ್ರಾಮದ ಮಾನಸಿಕ ಅಸ್ವಸ್ಥೆ ಥಳಿತಕ್ಕೆ ಒಳಗಾದವರು ಎಂದು ಗುರುತಿಸಲಾಗಿದೆ. ಕುಡಿಯಲು ನೀರು ಕೇಳಲು ಹೋದಾಗ ಅಪರಿಚಿತ ಮಹಿಳೆಯ ಮಾನಸಿಕ ವರ್ತನೆ ಕಂಡು ಗ್ರಾಮಸ್ಥರು ಅನುಮಾನಿಸಿದ್ದಾರೆ. ಆಕೆಯನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಸ್ವಗ್ರಾಮದ ಮಾಹಿತಿ ನೀಡದೆ ಬೇರೆ ಬೇರೆ ಊರಿನ ಹೆಸರು ಮಹಿಳೆ ಹೇಳಿದ್ದಾರೆ. ಆದ್ದರಿಂದ ಅನುಮಾನಗೊಂಡ ಗ್ರಾಮಸ್ಥರು, ಪೊಲೀಸರಿಗೆ ಮಾಹಿತಿ ನೀಡದೆ … Continue reading ಮಕ್ಕಳ ಕಳ್ಳಿಯೆಂದು ಅನುಮಾನಿಸಿ ಹಿಗ್ಗಾಮುಗ್ಗ ಥಳಿತ