ಕಿರುಕುಳ ಆರೋಪ: ಬಿಇಓ ಕಚೇರಿ ಅಧೀಕ್ಷಕ ಆತ್ಮಹತ್ಯೆ

ಗಂಗಾವತಿ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಧೀಕ್ಷಕರಾಗಿದ್ದ ಮಂಜುನಾಥ ಎಚ್.ಜಿ. ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಡ್ಡರಹಟ್ಟಿ-ಆರಾಳ್ ಮಧ್ಯೆ ಹರಿಯುವ ಎಡದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಮೃತದೇಹಕ್ಕಾಗಿ ಪೊಲೀಸರು ಹಾಗೂ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮಂಜುನಾಥ ಅವರು ವಿಕಲಚೇತನರಾಗಿದ್ದು, ಸೋಮವಾರ ಬೆಳಿಗ್ಗೆ ತಮ್ಮ ತ್ರಿಚಕ್ರ ವಾಹನದಲ್ಲಿ ತೆರಳಿ, ಕಾಲುವೆ ದಂಡೆಯಲ್ಲಿ ಬೈಕ್ ಬಿಟ್ಟು ಕಾಲುವೆಗೆ ಹಾರಿರುವುದಾಗಿ ಶಂಕಿಸಲಾಗಿದೆ. ಬಿಇಒ, ಮಹಿಳಾ ಸೂಪರಿಂಟೆಂಡೆಂಟ್ ಹಾಗೂ ಪತ್ರಾಂಕಿತ ವ್ಯವಸ್ಥಾಪಕರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದಾರೆ … Continue reading ಕಿರುಕುಳ ಆರೋಪ: ಬಿಇಓ ಕಚೇರಿ ಅಧೀಕ್ಷಕ ಆತ್ಮಹತ್ಯೆ