ಹೋರಿ ಬೆದರಿಸುವ ಸ್ಪರ್ಧೆ: 24ಕ್ಕೂ ಹೆಚ್ಚು ಜನರಿಗೆ ಗಾಯ

ಹಾವೇರಿ: ನಗರದ ಹೊರವಲಯದಲ್ಲಿ ರವಿವಾರ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಗಳ ತಿವಿತಕ್ಕೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, 20ಕ್ಕೂ ಅಧಿಕ ಮಂದಿ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಹಾವೇರಿ, ಶಿವಮೊಗ್ಗ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ತಮಿಳುನಾಡಿನಿಂದಲೂ ನೂರಾರು ಕೊಬ್ಬರಿ ಹೋರಿಗಳು ಭಾಗವಹಿಸಿದ್ದವು. ಹೋರಿಗಳ ರೋಚಕ ಓಟವನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು. ಶರವೇಗದಲ್ಲಿ ಓಡುತ್ತಿದ್ದ ಹೋರಿಗಳನ್ನು ಹಿಡಿಯಲು ಯುವಕರು ಮುನ್ನುಗ್ಗಿದಾಗ ಈ ಘಟನೆ ಸಂಭವಿಸಿದೆ. ಕೆಲವು ಹೋರಿಗಳು ಯುವಕರಿಗೆ ಕೊಂಬಿನಿಂದ ತಿವಿದ … Continue reading ಹೋರಿ ಬೆದರಿಸುವ ಸ್ಪರ್ಧೆ: 24ಕ್ಕೂ ಹೆಚ್ಚು ಜನರಿಗೆ ಗಾಯ