ಎಚ್‌.ಕೆ. ಪಾಟೀಲರಿಗೆ ಅನ್ಯಾಯ: ಗದಗನಲ್ಲಿ ಕ್ಷೌರಸೇವೆ ಬಹಿಷ್ಕಾರ

ಗದಗ: ಹಿರಿಯ ಕಾಂಗ್ರೆಸ್ ಧುರೀಣ, ಶಾಸಕ ಡಾ. ಎಚ್.ಕೆ. ಪಾಟೀಲ್‌ರಿಗೆ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವುದನ್ನು ವಿರೋಧಿಸಿ ಗದಗ ಜಿಲ್ಲೆಗೆ ಆಗಮಿಸುವ ಯಾವುದೇ ಸಚಿವರಿಗೆ ಕ್ಷೌರಸೇವೆ ನೀಡದಿರಲು ಜಿಲ್ಲಾ ಸವಿತಾ ಸಮಾಜ ನಿರ್ಧರಿಸಿದೆ. ನೂತನ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಗೌರವಪೂರ್ವಕವಾಗಿ ಸ್ವಾಗತ ಕೋರಲಾಗುವುದು. ಸವಿತಾ ಸಮಾಜದ ಅಭಿವೃದ್ಧಿ ಸೇರಿದಂತೆ ಯಾವುದೇ ಮನವಿ ಸಲ್ಲಿಸುವುದಿಲ್ಲ. ಸಮಾಜದ ಸಮಸ್ಯೆಗಳ ಪರಿಹಾರವನ್ನು ಎಚ್.ಕೆ. ಪಾಟೀಲ್ ಅವರ ಮೂಲಕವೇ ಪಡೆಯುವುದಾಗಿ ಜಿಲ್ಲಾ ಸವಿತಾ ಸಮಾಜದ ತುರ್ತು ಸಭೆಯಲ್ಲಿ ನಿರ್ಣಯ … Continue reading ಎಚ್‌.ಕೆ. ಪಾಟೀಲರಿಗೆ ಅನ್ಯಾಯ: ಗದಗನಲ್ಲಿ ಕ್ಷೌರಸೇವೆ ಬಹಿಷ್ಕಾರ