ಗೋಡಂಬಿ ಎಂದು ಔಡಲಬೀಜ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ

ಗದಗ: ಶಾಲಾ ಆಟದ ಸಮಯದಲ್ಲಿ ವಿಷಕಾರಿ ಔಡಲ ಬೀಜಗಳನ್ನು ಗೋಡಂಬಿ ಬೀಜವೆಂದು ಭಾವಿಸಿ ತಿಂದ ಪರಿಣಾಮ 25ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಗದಗ ತಾಲೂಕಿನ ಬೆಳದಡಿ ತಾಂಡಾದಲ್ಲಿ ಜರುಗಿದೆ. ವಾಂತಿ, ಭೇದಿ, ತಲೆಸುತ್ತಿನಿಂದ ಬಳಲುತ್ತಿದ್ದ ಮಕ್ಕಳನ್ನು ತಕ್ಷಣವೇ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಲಾ ಆಟದ ಸಮಯದಲ್ಲಿ ಮಕ್ಕಳಿಬ್ಬರು ಮಾಡಿದ ಸಣ್ಣದೊಂದು ಯಡವಟ್ಟು ಈಗ ಆತಂಕ ತಂದಿಟ್ಟಿದೆ. ಬೆಳದಡಿ ತಾಂಡಾದ ಸರ್ಕಾರಿ ಶಾಲೆಯ ಆಟದ ಅವಧಿಯಲ್ಲಿ … Continue reading ಗೋಡಂಬಿ ಎಂದು ಔಡಲಬೀಜ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ